ನಟಿ ಹರಿಪ್ರಿಯಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಅವರ ಮುಂದಿನ ಸಿನಿಮಾ ತಂಡಗಳು ಉಡುಗೊರೆಗಳನ್ನು ನೀಡಿವೆ. 'ಡಾಟರ್ ಆಫ್ ಪಾರ್ವತಮ್ಮ', 'ಕನ್ನಡ್ ಗೊತ್ತಿಲ್ಲ', 'ಸೂಜಿದಾರ' ಹಾಗೂ 'ಬೆಲ್ ಬಾಟಂ' ಚಿತ್ರಗಳ ಪೋಸ್ಟರ್ ಮತ್ತು ಟೀಸರ್ ಗಳು ಇಂದು ಬಿಡುಗಡೆಯಾಗಿವೆ.